ಬುಧವಾರ, ಆಗಸ್ಟ್ 19, 2009

ಸುಮಂಗಲಾ ಕತೆಗಳು

" ಕಾಲಿಟ್ಟಲ್ಲಿ ಕಾಲುದಾರಿ" ಇದು ನಾ ಇತ್ತೀಚೆಗೆ ಓದಿದ ಪುಸ್ತಕ. ಲೇಖಕಿ ಶ್ರೀಮತಿ ಸುಮಂಗಲಾ ಅವರು. ಛಂದ ಪುಸ್ತಕದವರು
ಇದನ್ನು ಹೊರತಂದಿದ್ದಾರೆ. ಇದರ ಬಿಡುಗಡೆಗೂ ನಾ ಹೋಗಿದ್ದೆ.. ಮೊದಲಬಾರಿ ಈ ಲೇಖಕಿ ಬರೆದ ಕತೆ ಓದಿದೆ
ತೀರ ಆತ್ಮೀಯ ಶೈಲಿ ಮಾನವ ಸಂಬಂಧಗಳ ಸೂಕ್ಷ್ಮ ಪ್ರತಿಪಾದನೆ ಈ ಎಲ್ಲ ಕತೆಗಳಲ್ಲೂ ಇದೆ... ಆಧುನಿಕ ಜೀವನ
ಶೈಲಿಗೆ ಸಿಲುಕಿ ಜಡವಾಗಿಹ ಪಾತ್ರಗಳಲ್ಲಿ ಸಂವೇದನೆ ಜೀವಂತವಾಗಿಡಲು ಲೇಖಕಿ ಹೆಣಗುತ್ತಿದ್ದಾರೆ ಅದರಲ್ಲಿ ಸಾಕಷ್ಟು
ಯಶಸ್ವಿಯೂ ಆಗಿದ್ದಾರೆ. ಪಾತ್ರ ಪೋಷಣೆ ವಿಷಯದಲ್ಲಿ ಲೇಖಕಿ ಗೆದ್ದಿದ್ದಾರೆ.

ಪ್ರಸ್ತುತ ಸಂಕಲನದಲ್ಲಿ ೧೩ ಕತೆಗಳಿವೆ ನನಗೆ ತೀರ ಸೇರಿದ ೫ ಕತೆಗಳ ಬಗ್ಗೆ ಇಲ್ಲಿ ಬರೆಯುತ್ತಿರುವೆ...
೧) ಮುತ್ತಿನ ಬುಗುಡಿ :
--------------- ನಾಯಕ ಮಧು ನಾಯಕಿ ವಿನುತ ವಯಸ್ಸಾದ ತಾಯಿ ಅವರ ಕ್ಯಾನ್ಸರ್ ಆರೈಕೆಗೆ ಕರೆದುಕೊಂಡು
ಬರುತ್ತಾರೆ. ಮಧು ವಿನುತಾನ ಕಲೀಗ್ಸ ಎಲ್ಲ ತಾಯಿಯನ್ನು ನೋಡಲು ಬರುತ್ತಿರುತ್ತಾರೆ. ಹಾಗೆಯೇ ಬಂದವರಲ್ಲಿ ಶಿವಾನಿಯೂ
ಒಬ್ಬಳು . ಹಾಕ್ಕೋ ಅಂತ ತಾಯಿ ಅವಳಿಗೆ ಮುತ್ತಿನಬುಗುಡಿ ನೀಡುತ್ತಾರೆ.ಅದು ಅವಳಿಗೆ ಚೆನ್ನಾಗಿ ಕಾಣಿಸಿದ್ದರಿಂದ ಅದನ್ನು ವಿನುತಾಗೆ ಇಟ್ಟುಕೊಳ್ಳಲು ಹೇಳುತ್ತಾರೆ. ಮಧುಗೆ ಹೀಗೆ ತನ್ನ ತಾಯಿ ಅಪರಿಚಿತಳಿಗೆ ಹೀಗೆ ಮುತ್ತಿನ ಬುಗುಡಿಕೊಟ್ಟಿದ್ದು ಸರಿ
ಬರುವುದಿಲ್ಲ... ಚಿಕಿತ್ಸೆ ಫಲಿಸದೆ ತಾಯಿ ತೀರಿ ಕೊಳ್ಳುತ್ತಾರೆ. ಆ ಬುಗುಡಿ ವಾಪಸ್ ಕೇಳಲು ನಿರ್ಧಾರ ಮಾಡುತ್ತಾನೆ ಅವಳ
ಮನೆ ಹತ್ತಿರ ಹೋಗಿ ಫೋನಾಯಿಸುತ್ತಾನೆ..ಶಿವಾನಿ ಹಾಹಿಕೊಂಡ ಬುಗುಡಿ ಫೋನ್ ರಿಸೀವರ್ ಗೆ ತಾಕುತಿರುತ್ತದೆ. ಅದು ಗಲ್ ಗಲ್ ಎಂದು ನಾದ ಹೊರಡಿಸುತ್ತಿರುತ್ತದೆ. ಅದರಲ್ಲಿ ತನ್ನ ತಾಯಿಯ ಎದೆಬಡಿತ ಅನುಭವಿಸುತ್ತ ಆ ಫೋನ್ ಗೆ ಮುತ್ತು ನೀಡುತ್ತಾನೆ.

ಸೂಕ್ಷ್ಮ ಮಾನವೀಯ ಸಂಬಂಧಗಳ ಸೆಳೆತ ಲೇಖಕಿ ಚಿತ್ರಿಸಿದ ಕತೆಯ ಜೀವಾಳ.. ಆ ಮುತ್ತಿನಬುಗುಡಿ ಶಿವಾನಿಗೂ ಮಧುನ
ತಾಯಿಗೂ ಒಂದು ಅಪರೂಪದ ನೆಂಟು ಬೆಸೆಯುತ್ತದೆ.

೨) ಒಂಟಿ ಗೆಜ್ಜೆ :
----------- ಮಿನು ಹಾಗೂ ಅವಳ ತಾಯಿಯ ನಡುವೆ ತಾಕಲಾಟ ವಿದೆ ತಾಯಿ ನಾಟ್ಯದ ಬೆನ್ನುಹತ್ತಿ ಮಮತೆ ಕೊಡಲಿಲ್ಲ ಇದು ಮಿನುನ ದೂರು. ಅಮ್ಮನ ಮೇಲಿನ ದ್ಚೇಷದಿಂದ ತಂದೆ ಸಹ ವಾತ್ಸಲ್ಯ ಹಂಚಲು ವಿಫಲ. ತಾಯಿ ಮಗಳು
ಬಹಳ ದಿನಗಳ ನಂತರ ಸಂಧಿಸುತ್ತಾರೆ. ದೋಷಾರೋಪಣೆ ಜತೆಗೆ ಅತೀತದಲ್ಲಿ ಇಣುಕುತ್ತಾರೆ. ಮಿನುನ ವೈಯುಕ್ತಿಕ ಜೀವನವೂ ಗೊಂದಲ ಇಬ್ಬರುಗೆಳೆಯರು .ತಾಯಿ ಉಂಗುರ ನಾಯಿ ನುಂಗಿದೆ ಎಂದಾಗ ಮಿನು ವ್ಯ್ಗಗ್ರ ಳಾಗಿ ಬಿಚ್ ಎಂದು ತಾಯಿಗೆ ಬೈಯ್ಯುತ್ತಾಳೆ. ತಾಯಿ ಪ್ರತಿಭಟಿಸಿ ತನ್ನ ಅಳಲು ತೋಡಿಕೊಳ್ಳುತ್ತಾಳೆ.ಸಂಹೆ ಆಫೀಸು ಮುಗಿಸಿ ಮನೆಗೆ ಬರುವಾಗ
ಮಿನು ಸುಂದರ ಹುಡುಗಿ ಕುರುಡನ ಕೈ ಹಿಡಿದು ನಡೆಸುತ್ತ ಆಶ್ರಮ ಮುಟ್ಟಿಸುವ ದೃಶ್ಯ ನೋಡುತ್ತಾಳೆ.

ತಾಯಿ ಮಗಳು ಇಬ್ಬರೂ ತಮ್ಮದೇ ಆದ ಅಸ್ತಿತ್ವಕ್ಕಾಗಿ ಹೋರಾಡುತ್ತಿರುತ್ತಾರೆ.ಲೇಖಕಿ ಪಾತ್ರ ಪೋಷಣೆಯಲ್ಲಿ ನುರಿತವರಿದ್ದಾರೆ
ಯಾವ ಪಾತ್ರದ ನಿಲುವು ಸರಿ ಉತ್ತರ ಹುಡುಕುತ್ತಲೆ ಓದುಗ ಇರುತ್ತಾನೆ. ಒಂದು ಅಪರೂಪದ ಕತೆ ಇದು.

೩) ಬೆರಳಂಚಿನ ಬೆಳಕಿಂಡಿ :
-------------------- ಮೋಹನರಾವ್ ನಿವೃತ್ತಿಯನಂತರವೂ ಒಂದು ಎನ್ ಜಿ ಓ ದಲ್ಲಿ ಕೆಲಸಕ್ಕೆ ಇರುತ್ತಾರೆ. ಒಂದು ಥರದ್ ಸುಖಿ ಜೀವನ
ಮಗಳು ಮಗ ಇಬ್ಬರೂ ಕೆಲಸದಲ್ಲಿ ದೂರದ ಊರಲ್ಲಿದ್ದಾರೆ. ಇಮೇಲ್ , ಫೋನ್ ಮೂಲಕ ಮಕ್ಕಳೊಡನೆ ಸಂಪರ್ಕದಲ್ಲಿರುತ್ತಾರೆ.ತಮ್ಮ ಆಫೀಸಿನ ಇತರೆ
ಕಲೀಗ್ಸಜೊತೆಯೂ ಬೆರೆಯಲು ಇಷ್ಟ ಪಡುತ್ತಿರುತ್ತಾರೆ. ಆಫೀಸ್ ಹಿಂದಿನ ಮನೆಯ ನೀರಿನ ಟ್ಯಾಂಕ ಒಂದು ಸೋರುತ್ತಿರುತ್ತದೆ. ಆ ನೀರಿನ ಸೋರಿಕೆ
ಪ್ರಮಾಣ ಎಕ್ಸೆಲ್ ನಲ್ಲಿ ಲೆಕ್ಕ ಹಾಕಿ ಸಹೋದ್ಯೋಗಿಗಳಿಗೆ ತೋರಿಸುತ್ತಾರೆ.ಅವರಿಂದ ನೀರಸ ಪ್ರತಿಕ್ರಿಯೆ ಬರುತ್ತದೆ. ಮೋಹನರಾವ್ ಆ ಮನೆಗೆ
ಫೋನಾಯಿಸಿ ಟ್ಯಾಂಕ್ ಸೋರುವುದರ ಬಗ್ಗೆ ಹೇಳುತ್ತಾರೆ. ಆದರೆ ಆ ಮನೆಯವರು ಇವರನ್ನೇ ದಬಾಯಿಸುತ್ತಾರೆ. ಧೃತಿಗೆಡದ ಮೋಹನರಾವ ಜಲ
ಮಂಡಳಿಗೆ ಒಂದು ಇಮೇಲ್ ಕಳಿಸುತ್ತಾರೆ ---ಅದಕ್ಕೆ ಆಫೀಸಿನ ಲೆಟರ್ ಹೆಡ್ ಬಳಸಿರುತ್ತಾರೆ. ಜಲಮಂಡಳಿಯವರು ಇವರು ಕೊಟ್ಟ ವಿವರ ಆಧರಿಸಿ
ಆ ಮನೆಯವರ ಮೇಲೆ ಕ್ರಮ ಜರುಗಿಸುತ್ತಾರೆ. ಇತ್ತ ಮೀಟಿಂಗ್ ವೇಳೆಯಲ್ಲಿ ಮೇಲಧಿಕಾರಿ ಯಿಂದ ಮೋಹನ್ ರಾವ್ ಗೆ ಬುಲಾವ್ ಬರುತ್ತದೆ.
ದೂರು ನೀಡುವುದಕ್ಕೆ ಆಫೀಸಿನ ಲೆಟರ್ ಹೆಡ್ ಬಳಸಿದ್ದು ಸರಿಅಲ್ಲ ಹಾಗೂ ವಿವರಣೆ ನೀಡಲು ಮೋಹನರಾವ್ ಗೆಹೇಳಲಾಗುತ್ತದೆ. ದ್ವಂದ್ವದಲ್ಲಿ ಸಿಲುಕಿದ
ಮೋಹನರಾವ್ ಮಕ್ಕಳ ಜೊತೆ ಚರ್ಚಿಸುತ್ತಾರೆ. ತಮ್ಮ ನಿಲುವು ಹೇಳುತ್ತಾರೆ. ಮಕ್ಕಳಿಂದ ಅನುಮೋದನೆ ಸಿಗುತ್ತದೆ.ಮರುದಿನ ಒಂದು ತಿಂಗಳ ನಂತರ
ಕೆಲಸ ಬಿಡುವುದಾಗಿ ನೋಟಿಸ್ ಕೊಡುತ್ತಾರೆ. ಅಂದು ಸಂಜೆ ಮನೆಗೆ ಹೋಗುವಾಗ ಎರಡು ಮೊಳ ಮಲ್ಲಿಗೆ ಖರಿದೀಸಿ ಮನೆ ಕಡೆ ನಡೆಯುತ್ತಾರೆ.

ಈ ಬದುಕಿನ ಜಂಜಡಗಳಿಗೆ ನಾವೆಲ್ಲ ಒಗ್ಗಿಹೋಗಿದ್ದೇವೆ ಸುತ್ತಲಲ್ಲಿ ಏನೇ ಅನ್ಯಾಯ ನಡೆದರೂ ಸ್ಪಂದಿಸದೆ ಮೂಕರಾಗಿದ್ದೆವೆ. ಮೋಹನರಾವ್ ಮಿನುಗುವ ತಾರೆ ಯಾಗುತ್ತಾರೆ. ಕನಿಷ್ಠ ಪ್ರತಿಭಟನೆಯೂ ಇಲ್ಲದೇ ಒಣಗುತ್ತಿರುವ ನಮ್ಮಲ್ಲಿ ಹೊಸ ಕಿಡಿ ಹತ್ತಿಸುತ್ತಾರೆ.
ಲೇಖಕಿ ಚೆನ್ನಾಗಿ ಸ್ಕೋರ್ ಮಾಡಿದ್ದಾರೆ ಮಹಿಳಾ ಸಾಹಿತ್ಯ ಎಂದು ಮೂಗು ಮುರಿಯುವವರೆಲ್ಲ ಓದಬೇಕು ಈ ಕಥೆ. ಸಂವೇದನೆ ಜೀವಂತವಾಗಿ
ಮಿಡಿದಿದೆ ಈ ಸಂಕಲನದ ಹೈ ಲೈಟ ಈ ಕಥೆ.

೪) ಚಿಗುರು :
----- ಪತ್ನಿ ಸಾವಿನ ನಂತರ ಮಗ ಸೊಸೆಯ ಜತೆ ಇರಲು ಮೂರ್ತಿ ಬಂದಿರುತ್ತಾರೆ. ಮಗ ಸಾಫ್ಟವೇರ್ ಮುಂದಿನ ದಿನಗಳಲ್ಲಿ ಅಮೇರಿಕಾಕ್ಕೆ
ಹೋಗಬೇಕಾಗಿರುತ್ತದೆ.ಸೊಸೆಯೂ ಉದ್ಯೋಗಿ ಅವರ ಪ್ಲಾನಿಂಗ್ ತಪ್ಪಿ ಸೊಸೆ ಬಸಿರಾಗಿರುತ್ತಾಳೆ ಅದು ಅವಳಿಗೆ ಇಷ್ಟ ಇರೋದಿಲ್ಲ ಆದರೆ ಮಗ
ತೆಗೆಸಲು ಒಪ್ಪುತ್ತಿಲ್ಲ ಒಂದುವಾರವಿಡಿ ಇದೇ ವಿಷಯಕ್ಕೆ ವಾದ ವಿವಾದ ನಡೆದಿರುತ್ತದೆ. ಮೂರ್ತಿ ಯಾರಕಡೆಯೂ ವಾಲದೆ ತಟಸ್ಥರಾಗಿರುತ್ತಾರೆ. ಆಗೀಗ
ಸೊಸೆಗೆ ಮನೆಗೆಲಸದಲ್ಲಿ ಸಹಾಯ ಮಾದುತ್ತಿರುತ್ತಾರೆ.ಮಗನಿಗೆ ಅಪ್ಪನ ಈ ಔದಾರ್ಯ ತೋರಿಕೆಯದ್ದು ಅನಿಸುತ್ತದೆ. ಅಮ್ಮನಿಗೆ ಒಂದಿನಿತೂ ಸಹಾಯ ಮಾಡದ ಅಪ್ಪ ಈಗ ಹೀಗೆ ಆಡುತ್ತಿರುವುದು ಸರಿ ಅನಿಸೂದಿಲ್ಲ.
ಮೂರ್ತಿ ಮಗನಿಗೆ ತಿಳಿಹೇಳುತ್ತಾರೆ. ತಾವೀಗ ಬದಲಾಯಿಸಿದ್ದು ಇದು ಹೊಸ ರೂಪ ಅಂತಾರೆ. ಒಂದು ದಿನ ಸೊಸೆಯಿಂದ ಫೋನ ಬರುತ್ತದೆ ಬ್ಲೀಡಿಂಗ್ ಆಗುತ್ತಿರುವುದಾಗಿ ಹೇಳಿದ ಅವಳಿಗೆ ಧೈರ್ಯ ತುಂಬಿ ಡಾಕ್ಟರ್ ಕಡೆ
ಕರೆದೊಯ್ಯುತ್ತಾರೆ.ಸೊಸೆ ಇರ್ಮಾಕ್ಕೆ ಅವಳೊಡನೆ ಬರಲು ಕೇಳಿಕೊಂಡಾಗ ಬದುಕು ತನ್ನ ಮುಂದೆ ಹೊಸ ಸಾಧ್ಯತೆ ತೆರೆದಿಟ್ಟ ಪರಿ ನೋಡಿ ಖುಷಿಯಿಂದ ಒಪ್ಪಿಕೊಳ್ಳುತ್ತಾರೆ.

ಮೂರ್ತಿ ಪಾತ್ರ ಪೋಷನೆ ಸರಿಯಾಗಿದೆ. ಹೊಸ ಸವಾಲುಗಳಿಗೆ ಆಯಾಮಗಳಿಗೆ ಅವರು ಒಪ್ಪಿಕೊಳ್ಳುವ ರೀತಿ ಪ್ರಶಂಸನೀಯ. ಚಿತ್ರಿಸಿದ ಲೇಖಕಿ ಅಭಿನಂದನಾರ್ಹರು. ನಿವೃತ್ತಿ ಜೀವನ ನಿಜಕ್ಕೂ ಸವಾಲಿನದು ಪಾತ್ರದ ಒಳಗನ್ನು ಲೇಖಕಿ ನಿರೂಪಿಸಿದ ಬಗೆ ಅನನ್ಯ. ಇದು ನಿಜಕ್ಕೂ ಶುಭ ಸೂಚನೆ. ಕಥೆಯಲ್ಲಿ
ಎಲ್ಲು ಭಾವೋದ್ರೇಕ ವಿಲ್ಲ ಸಮಸ್ಯೆಯನ್ನು ವೈಭವೀಕರಿಸದೆ ನವಿರಾದ ನಿರೂಪಣೆಯಿಂದ ಲೇಖಕಿ ಗೆದ್ದಿದ್ದಾರೆ.

೫) ಮಿಂಚುಹುಳ:
----------
ಅಕ್ಕ ,ತಂಗಿ ಹಾಗೂ ತಮ್ಮ ಬಹಳ ದಿನಗಳ ನಂತರ ಸೇರಿರುತ್ತಾರೆ ಅಕ್ಕನ ಬಾಳಿನಲ್ಲಿ ಎಲ್ಲವೂ ಸರಿ ಇಲ್ಲ ತಮ್ಮನಿಗೆ ಇದು ಗೊತ್ತಾಗಿರುತ್ತದೆ. ತಂಗಿಗೆ ವಿಚಾರಿಸಲು ಹೇಳುತ್ತಾನೆ. ತಂಗಿ ಕೆದಕಿ ಕೇಳಿದಾಗ ಅಕ್ಕ ಬಾಯ್ಬಿಡುತ್ತಾಳೆ. ಅಕ್ಕನ ಗಂಡ ವ್ಯವಹಾರದಲ್ಲಿ ಮುಗ್ಗಾಗಿ ಮೈತುಂಬ ಸಾಲಮಾಡಿಕೊಂಡಿರುತ್ತಾನೆ. ಸಾಲಗಾರರ ಕಾಟ ವಿಪರೀತ... ತಮ್ಮ ಬೇರೆ ಮದುವೆಯಾಗಿ ಬೇರೆ ಇದ್ದ ಅಪ್ಪನನ್ನು ಕರೆಸುತ್ತಾನೆ. ಎಲ್ಲರೂ ತಮಗೆ ಸಾಧ್ಯವಾದ ಸಹಾಯ ಮಾಡಲು ನಿರ್ಧಾರ ಮಾದುತ್ತಾರೆ. ಅಪ್ಪ ಹಾಗೂ ಮಗ ಮೂರು ಲಕ್ಷ ಹೊಂದಿಸಬಹುದು ...ತಂಗಿ ಊರಿಗೆ ಹೋಗಿ ಕೈಲಿ ಸಾಧ್ಯವಾದಷ್ಟು ಮಾಡುವುದಾಗಿ ಅಭಯ ಕೊಡುತ್ತಾಳೆ.ಇತ್ತ ತಂಗಿಯ ಗಂಡ ತಂಗಿಗೆ ಪ್ರಾಕ್ಟಿಕಲ್ ಆಗಿರಲು ಬೊಧನೆ ಮಾಡುತ್ತಾನೆ ಆದರೆ ಅಕ್ಕನಿಗೆ ಸಹಾಯ ಮಾಡಲೇಬೇಕು ಎಂದು ನಿರ್ಧಾರ ತಳೆದ ತಂಗಿ ಗೆಳತಿ ಹತ್ರ ಸಾಲ ಮಾಡಿ ಅಕ್ಕನಿಗೆ ಕಳಿಸಿಕೊಡುತ್ತಾಳೆ. ತಾನು ಪಾರ್ಟುಟೈಮ್ ಕೆಲಸ ಹಿಡಿದು ಮೂರುತಿಂಗಳಿಗೆ ಇಪ್ಪತ್ತು ಸಾವಿರ ಕೂಡಿ ಅದನ್ನು ಗೆಳತಿಗೆ ವಾಪಾಸ್ ಕೊದುವುದಕ್ಕೆ ಹೋಗಲು ಬಸ್ ಏರುತ್ತಾಳೆ ಬಸ್ಸಿನಲ್ಲಿ ಹಣ ಕಳುವಾಗುತ್ತದೆ...ಕಂಗೆಟ್ಟರೂ ಸೋಲು ಒಪ್ಪಿಕೊಳ್ಳದ ತಂಗಿ ಮತ್ತೆ ಹೋರಾಡಲು ತಯಾರಾಗುತ್ತಾಳೆ.

ಈಗಿನ ದಿನಮಾನಗಳಲ್ಲಿ ಒಬ್ಬರ ಕಷ್ಟಕ್ಕೆ ಇನ್ನೊಬ್ಬರಾಗುವುದು ಕನಸೇ ಸರಿ..ಅದೂ ಬಂಧುಗಳಗಿದ್ದರಂತೂ ಇನ್ನೂ ಕಠಿಣ... ಲೇಖಕಿ ಸಂಬಂಧಗಳ ಸುತ್ತ ಸಾಗುವ ಏಳು ಬೀಳು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ಎಲ್ಲೂ ವಾಲದೆ ಸರಿ ತಪ್ಪು ವಿವೇಚನೆ ಓದುಗನಿಗೆ ಬಿಡುವ ಕಲೆಅವರಿಗೆ ಕರಗತ ಆಗಿದೆ.
ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಈ ದಿನಗಳಲ್ಲಿ ಈ ಕತೆ ಚೇತೋಹಾರಿಯಾಗಿದೆ...

ಎಲ್ಲ ಹೇಳಿಯಾಗಿದೆ ಆದರೂ ಹೇಳುವೆ ಈ ಸಂಕಲನದ ಉಳಿದ ಕತೆಗಳೂ ಚೆನ್ನಾಗಿವೆ. ಹಾಗೆಯೇ ಛಂದ ಪುಸ್ತಕದ ಅಪಾರ ಹಾಗೂ ವಸುಧೇಂದ್ರ ಅಭಿನಂದನಾರ್ಹರು. ಅವರ ಪ್ರಯತ್ನ ಹೀಗೆಯೇ ಸಾಗಲಿ.....!

8 ಕಾಮೆಂಟ್‌ಗಳು:

  1. ಉಮೇಶ,
    ಈ ಕಥಾಸಂಕಲನ ನಾನು ಓದಿಲ್ಲ. ಆದರೆ ನಿಮ್ಮ ವಿಮರ್ಶೆಯ ಮೂಲಕ ಕತೆಗಳ ಶೈಲಿ,ಧೋರಣೆ ಇವುಗಳ ಸುಳಿವು ಸಿಕ್ಕಿತು. ಧನ್ಯವಾದಗಳು.
    (ಎರಡನೆಯದಾಗಿ, ಬ್ಲಾ^ಗ್ sideನಲ್ಲಿ ಫೋಟೋ ಹಾಕೀರಲ್ಲ; ಕಾಶ್ಮೀರದಲ್ಲಿ ತೆಗೆದದ್ದೆ?)

    ಪ್ರತ್ಯುತ್ತರಅಳಿಸಿ
  2. ಹಿಂಗೆ ಬರೀತಾ ಇರಿ..ನಾವು ಓದದಿದ್ರೂ ಓದಿದಂತಾಗುತ್ತೆ. ಸರ್ ಧನ್ಯವಾದಗಳು.
    -ಧರಿತ್ರಿ

    ಪ್ರತ್ಯುತ್ತರಅಳಿಸಿ
  3. ಕಾಕಾ ಪ್ರತಿಕ್ರಿಯೆ ಹಾಗೂ ಪ್ರೋತ್ಸಾಹಕ್ಕ ಧನ್ಯವಾದಗಳು....ಅದು ಕಾಶ್ಮೀರ ಅಲ್ಲ ನಿಮ್ಮ ಊರಿನ ಸುಭಾಷ ರಸ್ತೆ ಯ ರೇಗೆಯವರ
    ಅಂಗಡಿಯ ಕಟ್ಟಿ ...ಜೊತೆಗೆ ಕುಳಿತವ ----ಅವನ ಜತಿ ಕೂತು ಫೋಟೋ ತೆಗೆಸಿಕೊಳ್ಳುವ ಮನಸ್ಸಾತು ...ಅದಕ್ಕ...

    ಪ್ರತ್ಯುತ್ತರಅಳಿಸಿ
  4. ಧರಿತ್ರಿ ಧನ್ಯವಾದಗಳು ಓದುವುದು ಇನ್ನೂ ಬೆಳಿಸಿಕೊಳ್ಳಬೇಕಾಗೇದ ಹಂಗ ನಿಮ್ಮ ಜೋಡಿ ಹಂಚಿಕೋಬೇಕು....

    ಪ್ರತ್ಯುತ್ತರಅಳಿಸಿ
  5. ನೀವು ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ರೀತಿ ನೋಡಿದರೆ, ನನಗೂ ಈ ಪುಸ್ತಕ ಓದಬೇಕೆನಿಸಿದೆ.... ಹೀಗೇ ಬರೆಯುತ್ತಿರಿ ಸಾರ್.. ಚೆನ್ನಾಗಿದೆ...

    ಶ್ಯಾಮಲ

    ಪ್ರತ್ಯುತ್ತರಅಳಿಸಿ
  6. ನಿಮ್ಮ ವಿಮರ್ಶೆಯನ್ನೋದಿದ ಮೇಲೆ ಈ ಪುಸ್ತಕವನ್ನೋದಬೇಕೆಂದೆನಿಸುತ್ತಿದೆ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  7. "ಕಾಲಿಟ್ಟಲ್ಲಿ ಕಾಲುದಾರಿ" ಇದು ಯಾವ ಪುಸ್ತಕ ಪ್ರಕಾಶನ ಪ್ರಕಟಿಸಿದ್ದು ಮತ್ತು ಎಲ್ಲಿ ದೊರೆಯುತ್ತದೆ ಎಂದು ದಯವಿಟ್ಟು ತಿಳಿಸಿ ನನಗೊಂದು ಮಿಂಚೆ ಕಳುಹಿಸುವಿರಾ.. ನನ್ನ ವಿಳಾಸ TheAveen@gmail.com

    ಪ್ರತ್ಯುತ್ತರಅಳಿಸಿ
  8. ಕಥೆಯ ಸಾರಾಂಶವನ್ನು ಬರೆದು ಕಥೆಯ ಬಗ್ಗೆ ಎರಡು ಸಾಲು ಬರೆದರೆ ವಿಮರ್ಶೆಯಾಗಲಾರದು.
    "ಯಾವ ಪಾತ್ರದ ನಿಲುವು ಸರಿ ಉತ್ತರ ಹುಡುಕುತ್ತಲೆ ಓದುಗ ಇರುತ್ತಾನೆ." "ಸಂವೇದನೆ ಜೀವಂತವಾಗಿ ಮಿಡಿದಿದೆ" "ಎಲ್ಲ ಹೇಳಿಯಾಗಿದೆ ಆದರೂ ಹೇಳುವೆ ಈ ಸಂಕಲನದ ಉಳಿದ ಕತೆಗಳೂ ಚೆನ್ನಾಗಿವೆ" "ಒಂದು ಅಪರೂಪದ ಕತೆ ಇದು." "ಲೇಖಕಿ ಚೆನ್ನಾಗಿ ಸ್ಕೋರ್ ಮಾಡಿದ್ದಾರೆ " "ಪಾತ್ರದ ಒಳಗನ್ನು ಲೇಖಕಿ ನಿರೂಪಿಸಿದ ಬಗೆ ಅನನ್ಯ." "ಲೇಖಕಿ ಸಂಬಂಧಗಳ ಸುತ್ತ ಸಾಗುವ ಏಳು ಬೀಳು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ಎಲ್ಲೂ ವಾಲದೆ ಸರಿ ತಪ್ಪು ವಿವೇಚನೆ ಓದುಗನಿಗೆ ಬಿಡುವ ಕಲೆಅವರಿಗೆ ಕರಗತ ಆಗಿದೆ." "ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಈ ದಿನಗಳಲ್ಲಿ ಈ ಕತೆ ಚೇತೋಹಾರಿಯಾಗಿದೆ..." ಎಂದೆಲ್ಲಾ ರೆಕಾರ್ಡೆಡ್ ಸ್ಲೋಗನ್ನುಗಳನ್ನು ತುಂಬಿಸಿ, ಸುಮ್ಮಸುಮ್ಮನೇ ಲೇಖಕಿಯನ್ನು ಹೊಗಳಿ ಬರೆಯುವುದರ ಮೂಲಕ ನಿಮ್ಮ ಓದಿನ ಅನುಭವದ ಸ್ತರವನ್ನು ಪ್ರದರ್ಶಿಸಿದ್ದೀರಿ.
    ಬ್ಲಾಗಿಂಗಿನ ಒಂದು ಪುಟದಲ್ಲಿ ಒಂದು ಕಥಾಸಂಗ್ರಹದ ಬಗ್ಗೆ ಬರೆಯುವ ಸಾಹಸ ಯಾರಿಗೂ ಪ್ರಯೋಜನವಾಗಲಾರದು. ಇಷ್ಟನ್ನೇ ಓದಿ ಆ ಪುಸ್ತಕವನ್ನು ಓದಬೇಕು ಎಂದು ಕುತೂಹಲ ತೋರಿದವರ ಕುರಿತು ಸೋಜಿಗವೆನ್ನಿಸುತ್ತದೆ

    ಪ್ರತ್ಯುತ್ತರಅಳಿಸಿ